History
ದಿನಾಂಕ 28.12.1989 ರಿಂದ ನಗರದ ಸಂಪಗಿರಾಮ ನಗರದಲ್ಲಿ ಅಂದಿನ ಉಪಾಧ್ಯಕ್ಷರಾದ ಶ್ರೀ ಬಿ ವಿ ಗಣಪತಿಯವರ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. ನಂತರ 1997 ರಲ್ಲಿ ಮೆಜಿಸ್ಟಿಕ್ ಹತ್ತಿರದ ಅಂಚೆಪೇಟೆಗೆ ವ್ಯಾಪಾರ ಅಭಿವೃದ್ದಿಯ ದೃಷ್ಟಿಯಿಂದ ಸ್ಥಳಾಂತರಿಸಲಾಯಿತು. ಸತತವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಗಮನಿಸಿದ ಆಡಳಿತ ಮಂಡಳಿಯ ಸದಸ್ಯರು ಚಾಮರಾಜಪೇಟೆ ಸುತ್ತ ಮುತ್ತಲಿನ ಸದಸ್ಯರಿಗೆ ಅನುಕೂಲಕರವಾಗಲೆಂದು ದಿನಾಂಕ 06.12.2009 ರಂದು ಅಂದಿನ ಅಧ್ಯಕ್ಷರಾದ ಶ್ರೀ ಬಿ ವಿ ಗಣಪತಿಯವರ ಅಧ್ಯಕ್ಷತೆಯಲ್ಲಿ ಚಾಮರಾಜಪೇಟೆ, 5ನೇ ಮುಖ್ಯರಸ್ತೆ ಯಲ್ಲಿ “ದೈವಜ್ಞ ಭವನ ” ಎಂಬ ಕಟ್ಟಡವನ್ನು ಸಂಘದ ಹೆಸರಿನಲ್ಲಿ ಖರೀದಿಸಿ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜಾನೇಶ್ವರ ಭಾರತಿ ಮಹಾ ಸ್ವಾಮಿಗಳ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು. 2010ನೇ ಸಾಲಿನಲ್ಲಿ ಸೊಸೈಟಿಯ ವ್ಯವಹಾರಗಳನ್ನು ಗಣಕೀಕೃತ ಮಾಡಬೇಕೆಂದು ಆಡಳಿತ ಮಂಡಳಿಯು ನಿರ್ಧಿರಿಸಿ 2010ನೇ ಸಾಲಿನಲ್ಲಿ ಸೊಸೈಟಿಯ ಒಟ್ಟು 4 ಶಾಖೆಗಳು ಹಾಗೂ ಕೇಂದ್ರ ಕಛೇರಿಯು ಸಂಪೂರ್ಣ ಗಣಕೀಕೃತವಾಗಿರುತ್ತದೆ ಪ್ರತಿ ವರ್ಷವು ಉತ್ತಮ ಲಾಭದೊಂದಿಗೆ ಪ್ರಗತಿ ಸಾಧಿಸುತ್ತಿರುವುದರಿಂದ ಲೆಕ್ಕಪರಿಶೋಧನೆಯಲ್ಲಿ ಸೊಸೈಟಿಗೆ ಎ ದರ್ಜೆಯ ವರ್ಣಕರಣ ನೀಡಲಾಗುತ್ತಿದೆ. ಅಖಿಲ ಭಾರತ ಸಹಕಾರ ಮಹಾ ಮಂಡಳಿಯವರಿಂದ “ ಅತ್ಯುತ್ತಮ ಪತ್ತಿನ ಸಹಕಾರ ಸಂಘ ” ಎಂಬ ಪ್ರಶಸ್ತಿಯನ್ನು ಗಳಿಸಿದೆ. ಸೊಸೈಟಿಯಲ್ಲಿ ವಿವಿಧ ರೀತಿಯ ಆಕರ್ಷಕ ಠೇವಣಿಗಳನ್ನು ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಸದಸ್ಯರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸೊಸೈಟಿಯು 2014ನೇ ಸಾಲಿನಲ್ಲಿ ತನ್ನ 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವನ್ನು ಅಂದಿನ ಅಧ್ಯಕ್ಷರಾದ ಶ್ರೀ ಸುಬ್ಬರಾವ್ ಎ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜಾಜಿನಗರದಲ್ಲಿ ತನ್ನ 3ನೇ ಶಾಖೆಯನ್ನು ಪ್ರಾರಂಭಿಸಲಾಯಿತು. ಹಾಗೂ 2023ನೇ ಸಾಲಿನಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸುನೀಲ್ ವೈ ರೇವಣಕರ್ ರವರ ಅಧ್ಯಕ್ಷತೆಯಲ್ಲಿ ವಿಜಯನಗರದ ಆರ್ ಪಿ ಸಿ ಲೇಔಟ್ ನಲ್ಲಿ ಅತ್ಯಂತ ಸುಸಜ್ಜಿತವಾದ ಕಟ್ಟಡವನ್ನು ಸಂಘದ ಹೆಸರಿನಲ್ಲಿ ಖರೀದಿಸಿ ಇದೇ ಸಂದರ್ಭದಲ್ಲಿ ಸೊಸೈಟಿಯ 4ನೇ ಶಾಖೆಯನ್ನು ಪ್ರಾರಂಭಿಸಲಾಯಿತು. ಪ್ರಸ್ಥುತವಾಗಿ ಸೊಸೈಟಿಯು ರೂ. 145 ಕೋಟಿಗೂ ಹೆಚ್ಚಿನ ಠೇವಣಿಯನ್ನು ಸಂಗ್ರಹಿಸಿದ್ದು ರೂ.110 ಕೋಟಿಗೂ ಸದಸ್ಯರಿಗೆ ಸಾಲ ಸೌಲಭ್ಯವನ್ನು ನೀಡಿದ್ದು ರೂ. 50 ಕೋಟಿಗಳ ಹೆಚ್ಚಿನ ಠೇವಣಿಯನ್ನು ಹೂಡಿಕೆಯನ್ನು ಮಾಡಲಾಗಿದೆ.